ಕಳೆದ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಶೇಕಡಾ 84.92 ಫಲಿತಾಂಶವನ್ನು, ವಿಜ್ಞಾನ ವಿಭಾಗದಲ್ಲಿ ಶೇಕಡಾ 83.56 ಫಲಿತಾಂಶವನ್ನು ಹಾಗೂ ಕಲಾ ವಿಭಾಗದಲ್ಲಿ ಶೇಕಡಾ 71.43 ಫಲಿತಾಂಶವನ್ನು, ಪಡೆದಿದ್ದು ಒಟ್ಟು ದ್ವಿತೀಯ ಪಿಯುಸಿ ವಿಭಾಗದಲ್ಲಿ ಶೇಕಡಾ 83.29 ಫಲಿತಾಂಶ ಬಂದಿರುತ್ತದೆ.
ಕಳೆದ ಸಾಲಿನ ಸಿಇಟಿ ಪರೀಕ್ಷೆಯಲ್ಲಿ ಸುನೀಲ್ ಹೆಗಡೆ 3151 ನೇ ರ್‍ಯಾಂಕ್, ಸುದರ್ಶನ ಹೆಗಡೆ 4257 ನೇ ರ್‍ಯಾಂಕ್, ಸದಾನಂದ ಹೆಗಡೆ 4701 ನೇ ರ್‍ಯಾಂಕ್, ವಸುಧಾ ಭಗತ್ 5874 ನೇ ರ್‍ಯಾಂಕ್ ಪಡೆದಿರುತ್ತಾರೆ.
ದಿನಾಂಕ 18-11-2022 ರಂದು ಮುರ್ಡೇಶ್ವರದ ಆರ್.ಎನ್.ಶೆಟ್ಟಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ನಮ್ಮ ಮಹಾವಿದ್ಯಾಲಯದ ದೀಪ್ತಿ ಮಂಜುನಾಥ ನಾಯ್ಕ (ಪ್ರಥಮ ಪಿಯುಸಿ ವಿಜ್ಞಾನ) – ಪ್ರಬಂಧ ಸ್ಪರ್ಧೆಯಲ್ಲಿ – ಪ್ರಥಮಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ನಾಗಶ್ರೀ ಎಂ. ಭಟ್ಟ (ದ್ವಿತೀಯ ಪಿಯುಸಿ ವಿಜ್ಞಾನ)- ಚರ್ಚಾ ಸ್ಪರ್ಧೆಯಲ್ಲಿ – ತೃತೀಯ ಸ್ಥಾನ, ಯೂನುಸ್ ಖಾನ್ ಸಮೀರ್ ಖಾನ್ (ಪ್ರಥಮ ಪಿಯುಸಿ ವಾಣಿಜ್ಯ) – ಚರ್ಚಾ ಸ್ಪರ್ಧೆಯಲ್ಲಿ- ತೃತೀಯ ಸ್ಥಾನ ಹಾಗೂ ಯಶಸ್ವಿನಿ ಸತ್ಯನಾರಾಯಣ ಹೆಗಡೆ (ದ್ವಿತೀಯ ಪಿಯುಸಿ ವಾಣಿಜ್ಯ)- ಭಾವಗೀತೆ ಸ್ಪರ್ಧೆಯಲ್ಲಿ – ತೃತೀಯ ಸ್ಥಾನ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾರೆ.
ದಿನಾಂಕ 5/12/2022 ರಂದು ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಕುಮಟಾ, ಇವರ ಸಹಯೋಗದಲ್ಲಿ ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜು ಕುಮಟಾದಲ್ಲಿ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ನಡೆದ ಜಿಲ್ಲಾ ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ನಮ್ಮ ಮಹಾವಿದ್ಯಾಲಯದ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ಯುನುಸ್ ಖಾನ್ ಸಮೀರ್ ಖಾನ್ ಈತನು ಪ್ರಥಮ ಸ್ಥಾನಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾನೆ.
ದಿನಾಂಕ 21-9-2022 ರಂದು ಧಾರವಾಡದಲ್ಲ್ಲಿ ನಡೆದ 2022-23ನೇ ಸಾಲಿನ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಕು. ಈಶ್ವರ ಎನ್. ಗೌಡ, ದ್ವಿತೀಯ ಪಿಯುಸಿ ಕಲಾ ವಿಭಾಗ ಈತನು 110ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿರುತ್ತಾನೆ.
ದಿನಾಂಕ 26-9-2022 ಹಾಗೂ 26-9-2022 ರಂದು ನಮ್ಮ ಮಹಾವಿದ್ಯಾಲಯದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಪದವಿ ಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಈಶ್ವರ ಎನ್. ಗೌಡ ಇತನು 110ಮೀ ಹಾಗೂ 400 ಮೀ ಹರ್ಡಲ್ಸ್‍ನಲ್ಲಿ ಪ್ರಥಮ, ತ್ರಿವಿಧ ಜಿಗಿತ ದ್ವಿತೀಯ, 4×100ಮೀ ರಿಲೇಯಲ್ಲಿ ಪ್ರಥಮ ಸ್ಥಾನ, ಚಿನ್ಮಯ ಮರಾಠೆ 200ಮೀ ಓಟದಲ್ಲಿ ದ್ವಿತೀಯ, 4×100ಮೀ ರಿಲೇಯಲ್ಲಿ ಪ್ರಥಮ ಸ್ಥಾನ, ಮನೋಜ ನಾಯ್ಕ 4×100ಮೀ ರಿಲೇಯಲ್ಲಿ ಪ್ರಥಮ ಸ್ಥಾನ, ಅಂಜಲಿ ಅಡಿಗುಂಡಿ ಚಕ್ರ ಎಸೆತ ಪ್ರಥಮ, ಗುಂಡು ಎಸೆತ ದ್ವಿತೀಯ, ಹ್ಯಾಮರ್ ಎಸೆತ ತೃತೀಯ, ಸಹನಾ ದಾಸ ಖಾರ್ವಿ 400ಮೀ ಹರ್ಡಲ್ಸ್‍ನಲ್ಲಿ ದ್ವಿತೀಯ ಸ್ಥಾನ, ಆದರ್ಶ ಎಸ್. ಹೆಗಡೆ ಮತ್ತು ಗುರುದೇವ್ ಕಿಣಿ ಚೆಸ್ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ, ಸಿಂಚನಾ ಎಂ. ನಾಯ್ಕ ಎತ್ತರ ಜಿಗಿತ ತೃತೀಯ ಸ್ಥಾನ, ಚೈತ್ರ ಪ್ರಭು ಕರಾಟೆಯಲ್ಲಿ ತೃತೀಯ ಸ್ಥಾನ, ದಿನೇಶ ಎಸ್. ಗೌಡ ಉದ್ದ ಜಿಗಿತದಲ್ಲಿ ತೃತೀಯ ಸ್ಥಾನ, ರಾಧಾಕೃಷ್ಣ ಪ್ರಭು ಮತ್ತು ರಜತ ಶಾನಭಾಗ ಬ್ಯಾಡ್ಮಿಂಟನ್ಸ ರನ್ನರ್ಸ್, ಜೈಯಾನ್ ಎಂ. ಜೋಪಾ ಮತ್ತು ಉಮೇರ್ ಅಬ್ದುಲ್ ರಹೀಮ್ ಸಿದ್ದಿಬಪ್ಪಾ ಪುಟ್ಬಾಲ್‍ನಲ್ಲಿ ರನ್ನರ್ಸ್ ಆಗಿರುತ್ತಾರೆ. ಇದರಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದವರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾರೆ.
ದಿನಾಂಕ 6-11-2022 ರಂದು ಶಿರಸಿಯಲ್ಲಿ ನಡೆದ 20 ವರ್ಷ ವಯೋಮಿತಿ ಒಳಗಿನವರಿಗೆ ನಡೆದ ಜಿಲ್ಲಾ ಮಟ್ಟದ ಆಯ್ಕೆ ಕ್ರೀಡಾಕೂಟದಲ್ಲಿ ಕು. ಈಶ್ವರ ಎನ್. ಗೌಡ, ದ್ವಿತೀಯ ಪಿಯುಸಿ ಕಲಾ ವಿಭಾಗ ಈತನು ತ್ರಿವಿದ ಜಿಗಿvದಲ್ಲಿ ಪ್ರಥಮ, 110ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾನÉ.
ದಿನಾಂಕ 17-12-2022 ರಿಂದ 19-12-2022ರವರೆಗೆ ಮಂಗಳೂರಿನಲ್ಲಿ ನಡೆದ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕು. ಈಶ್ವರ ಎನ್. ಗೌಡ, ದ್ವಿತೀಯ ಪಿಯುಸಿ ಕಲಾ ವಿಭಾಗ ಈತನು 110ಮೀ ಹರ್ಡಲ್ಸ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿರುತ್ತಾನÉ.
ದಿನಾಂಕ 24-5-2022 ರಿಂದ 4-6-2022 ರ ವರೆಗೆ ಕಾರವಾರ ಹಾಗೂ ಬೆಳಗಾವಿಯಲ್ಲಿ ನಡೆದ ಎರಡು ಹಂತದ “ತಲ ಸೈನಿಕ್” ಕ್ಯಾಂಪನಲ್ಲಿ ಎಸ್.ಯು.ಒ. ಅನಿಶಾ ನಾಯ್ಕ ಪಾಲ್ಗೊಂಡು ವಿಶೇಷ ಸಾಧನೆ ಮಾಡಿರುತ್ತಾಳೆ.