ಎಂ. ಪಿ. ಇ. ಸೊಸೈಟಿಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ವಿಜ್ಞಾನ ವಿಷಯ ಅಭ್ಯಸಿಸುವ ವಿದ್ಯಾರ್ಥಿಗಳಿಗಾಗಿ ಇಂಟಿಗ್ರೇಟೆಡ್ ಬ್ಯಾಚ್ ಆರಂಭಿಸಿದೆ. P.C.M.B. ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಆಸಕ್ತ ವಿದ್ಯಾರ್ಥಿಗಳಿಗೆ ಈ ಬ್ಯಾಚ್ನಲ್ಲಿ ಅವಕಾಶವನ್ನು ನೀಡಲಾಗುವುದು.
ಸ್ಪರ್ಧಾತ್ಮಕ ಪರೀಕ್ಷೆಗಳಾದ CET, JEE, NEET ವಿಷಯದ ತರಬೇತಿಯನ್ನು ನುರಿತ ಉಪನ್ಯಾಸಕರಿಂದ ನೀಡಲಾಗುತ್ತಿದೆ. ಮೊದಲು ಬಂದವರಿಗೆ ಹೆಚ್ಚಿನ ಆದ್ಯತೆ ನೀಡಿ, ಸೀಮಿತ ವಿದ್ಯಾರ್ಥಿಗಳ ಬ್ಯಾಚ್ ಮಾಡಿ ತರಗತಿ ನಡೆಸಲಾಗುತ್ತಿದೆ. ಪಿ.ಯು.ಬೋರ್ಡ್ ವಿಷಯಗಳಿಗೂ ಹೆಚ್ಚಿನ ಪ್ರಾಶಸ್ತ್ರ ನೀಡಲಾಗುವುದು.
ಪ್ರಸಕ್ತ 2023-24 ನೇ ಸಾಲಿನ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಕಾಲೇಜಿನ 11 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯನ್ನು ಪಡೆದು ತೇರ್ಗಡೆಯನ್ನು ಹೊಂದಿರುತ್ತಾರೆ. ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಪಡೆಯಲು ಉತ್ತಮ ಅವಕಾಶ ಮತ್ತು ಒಳ್ಳೆಯ ವಾತಾವರಣವನ್ನು ಎಂ.ಪಿ.ಇ.ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಕಲ್ಪಿಸಿಕೊಟ್ಟಿದೆ. ಅಲ್ಲದೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿರುವ ಹೆಗ್ಗಳಿಕೆ ನಮ್ಮದಾಗಿದೆ.