ನ್ಯಾಷನಲ್ ಟೆಸ್ಟಿಂಗ್ ಏಜನ್ಸಿ ನಡೆಸುವ ಜೆಇಇ ಮೆನ್ಸ್ ಮೊದಲ ಹಂತದ ಪರೀಕ್ಷೆಯ ಫಲಿತಾಂಶದಲ್ಲಿ ಎಂಪಿಇ ಸೊಸೈಟಿಯ ಎಸ್.ಡಿ.ಎಂ. ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಭ್ಯಸಿಸಿದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ರೋಹನ್ ದೇಸಾಯಿ 99.24 ಪೆರ್ಸಂಟೈಲ್ ಅಂಕ ಪಡೆದು ಜಿಲ್ಲೆಗೆ ಒಂದನೇ ಸ್ಥಾನ ಪಡೆದಿದ್ದಾನೆ. ಸಂಪತ್ ನಾಯ್ಕ 96.05 ಪೆರ್ಸಂಟೈಲ್, ಶಿವ ಗಣೇಶ್ ಭೋವಿ 96.24, ರೋಹಿತ್ ದೇಸಾಯಿ 95.58 ಪೆರ್ಸಂಟೈಲ್ ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.ಇನ್ನೂ ಹಲವು ವಿದ್ಯಾರ್ಥಿಗಳು 80ಕ್ಕೂ ಅಧಿಕ ಪೆರ್ಸಂಟೈಲ್ ಅಂಕ ಪಡೆದಿದ್ದಾರೆ.ಇವರ ಸಾಧನೆಗೆ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಪ್ರಾಚಾರ್ಯರು ಬೋಧಕ ಬೋಧಕೇತರ ಸಿಬ್ಬಂದಿ ಶುಭವನ್ನು ಹಾರೈಸಿದ್ದಾರೆ.