1. ವಿದ್ಯಾರ್ಥಿಯು ತನಗೆ ಸಂಬಂಧಿಸಿದ ಎಲ್ಲ ತರಗತಿಗಳಿಗೂ ಹಾಜರಿರಬೇಕು. ತಮ್ಮದಲ್ಲದ ತರಗತಿಗಳಿಗೆ ಹೋಗಬಾರದು. ಕನಿಷ್ಠ ಶೇಕಡಾ 75 ಹಾಜರಾತಿ ಪಡೆದರೆ ಮಾತ್ರ ವಾರ್ಷಿಕ ಪರೀಕ್ಷೆಗೆ ಕುಳಿತುಕೊಳ್ಳಲು ಅರ್ಹರಾಗುತ್ತಾನೆ/ಳೆ.
  2. ಹಾಜರಾತಿ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
  3. ಕಾಲೇಜಿನಲ್ಲಿ ನಡೆಯುವ ಎಲ್ಲ ಪರೀಕ್ಷೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು.
  4. ತರಗತಿಗಳು ನಡೆಯುವಾಗ ವಿದ್ಯಾರ್ಥಿಗಳು ವರಾಂಡದ ಮೇಲೆ ತಿರುಗುವುದನ್ನು ದಂಡಾರ್ಹ ಅಪರಾಧ ಎಂದು ಪರಿಗಣಿಸಲಾಗುವುದು.
  5. ತರಗತಿಗಳು ನಡೆಯುವಾಗ ಅಥವಾ ಕಾಲೇಜಿನ ತರಗತಿಗಳ ಅವಧಿಯಲ್ಲಿ ತರಗತಿಗಳಿಗೆ ತೊಂದರೆ ಉಂಟು ಮಾಡಿದ್ದಲ್ಲಿ ಅಂತಹ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ತೆಗೆದು ಹಾಕಲಾಗುವುದು.
  6. ತನ್ನ ಭಾವಚಿತ್ರ ಅಂಟಿಸಿದ ಕಾರ್ಡನ್ನು ವಿದ್ಯಾರ್ಥಿಯು ಸದಾ ತನ್ನೊಂದಿಗೆ ಇಟ್ಟುಕೊಂಡಿರಬೇಕು ಹಾಗೂ ಕ್ಯಾಂಪಸ್ ಕಾರ್ಡನ್ನು ತಪ್ಪದೇ ಧರಿಸಬೇಕು. ಮಹಾವಿದ್ಯಾಲಯದ ಯಾವುದೇ ಸಿಬ್ಬಂದಿ ವಿಚಾರಿಸಿದರೆ ಅವುಗಳನ್ನು ತೋರಿಸಬೇಕು. ಕಾರ್ಡ್ ಕಳೆದುಕೊಂಡರೆ ರೂ. 100/-ನ್ನು ಕಛೇರಿಯಲ್ಲಿ ತುಂಬಿ ಡುಪ್ಲಿಕೇಟ್ ಕಾರ್ಡ್ ನ್ನು ಪಡೆದುಕೊಳ್ಳಬೇಕು. ಡುಪ್ಲಿಕೇಟ್ ಕಾರ್ಡ್ನ್ನು ಕೊಡುವ ಯಾ ಬಿಡುವ ಅಧಿಕಾರ ಪ್ರಾಚಾರ್ಯರಿಗಿದೆ.
  7. ಮಹಾವಿದ್ಯಾಲಯ ನಿಗದಿಪಡಿಸಿದ ಸಮವಸ್ತ್ರಕ್ಕೆ ಎಲ್ಲಾ ವಿದ್ಯಾರ್ಥಿಗಳೂ ಬದ್ಧರಾಗಿರಬೇಕು. ಮತ್ತು ಪ್ರತಿನಿತ್ಯ ಅದನ್ನು ಧರಿಸುವುದು ಕಡ್ಡಾಯವಾಗಿರುತ್ತದೆ. ಕಾಲೇಜಿನ ಸಮವಸ್ತ್ರ ಹೊರತುಪಡಿಸಿ ಬೇರೆ ಯಾವುದೇ ಉಡುಪಿಗೆ ಅವಕಾಶವಿರುವುದಿಲ್ಲ.
  8. ಪ್ರಥಮ ಪಿ.ಯು.ಸಿ ಗೆ ಪ್ರವೇಶ ಪಡೆದ ದಿನದಿಂದ ದ್ವಿತೀಯ ಪಿ.ಯು.ಸಿ ಮುಗಿಯುವವರೆಗೂ ಯಾವುದೇ ಸಂದರ್ಭದಲ್ಲಿ ಕಾಲೇಜಿಗೆ ಭೇಟಿ ನೀಡುವಾಗ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿಯೇ ಬರಬೇಕು.
  9. ಕಾಲೇಜಿನ ಯಾವುದೇ ಆಸ್ತಿಯನ್ನು ಕೆಡಿಸುವ ಯಾ ವಿರೂಪಗೊಳಿಸುವ ಯಾ ಅಪಹರಣಗೊಳಿಸಲು ಯತ್ನಿಸಿದ ವಿದ್ಯಾರ್ಥಿ ದಂಡನಾರ್ಹ.
  10. ಸ್ಪೋಟಕ ವಸ್ತುಗಳನ್ನು ಕಾಲೇಜಿನಲ್ಲಿ ತರುವುದನ್ನು ಹಾಗೂ ಸ್ಪೋಟಗೊಳಿಸುವುದನ್ನು ನಿಷೇಧಿಸಲಾಗಿದೆ.
  11. ಬೀಡಿ, ಸಿಗರೇಟು, ಗುಟಕಾ ಸೇವನೆ, ಮಧ್ಯ ಸೇವನೆಯನ್ನು ಕಾಲೇಜು ಆವಾರದಲ್ಲಿ ನಿಷೇಧಿಸಲಾಗಿದೆ. ನಿಯಮವನ್ನು ಉಲ್ಲಂಘಿಸಿದಲ್ಲಿ ಶಿಕ್ಷೆಗೆ ಒಳಪಡಿಸಲಾಗುವುದು.
  12. ವಿದ್ಯಾರ್ಥಿಗಳು ವರ್ಷದ ಮಧ್ಯಂತರದಲ್ಲಿ ಕಾಲೇಜು ಬಿಡುವುದಾದಲ್ಲಿ ಪ್ರಾಚಾರ್ಯರಿಗೆ ಲಿಖಿತ ತಿಳಿಸಿ ಮಂಜೂರಿ ಪಡೆದುಕೊಳ್ಳಬೇಕು.
  13. ಕಾಲೇಜಿನ ಸೂಚನಾ ಫಲಕಗಳನ್ನು ವಿದ್ಯಾರ್ಥಿಗಳು ಪ್ರತಿದಿನ ಗಮನಿಸುತ್ತಿರಬೇಕು. ಕಾಲೇಜಿನಲ್ಲಿ ಸಲ್ಲಿಸಿದ ಹಣಕ್ಕೆ ಪಾವತಿ ಪಡೆಯಬೇಕು.
  14. ರ‍್ಯಾಗಿಂಗ್ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ವಜಾ ಮಾಡಲಾಗುವುದು.
  15. ಮಹಾವಿದ್ಯಾಲಯದ ಆವಾರದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಫೋನ್ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಲ್ಲಿ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು.
  16. ಕಾಲೇಜಿನ ಯಾವತ್ತೂ ನೀತಿ-ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು. ವಿದ್ಯಾರ್ಥಿಗಳ ಆದ್ಯ ಕರ್ತವ್ಯ. ತಪ್ಪಿದ್ದಲ್ಲಿ ದಂಡನೆ/ಶಿಕ್ಷೆಗೆ ಒಳಪಡುತ್ತಾರೆ.
  17. ವಿದ್ಯಾರ್ಥಿಯು ಕಾಲೇಜಿನ ವ್ಯಾಸಂಗಾವಧಿಯಲ್ಲಿ ಇಲಾಖೆಯ ಎಲ್ಲಾ ಆಡಳಿತ/ಶೈಕ್ಷಣಿಕ/ಪರೀಕ್ಷಾ ನಿಯಮಗಳಿಗೆ ಬದ್ಧನಾಗಿರಬೇಕು.
  18. ವಿದ್ಯಾರ್ಥಿಯು ಕಾಲೇಜಿನ/ಇಲಾಖೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಶಿಸ್ತಿನಿಂದ ನಡೆದುಕೊಳ್ಳಬೇಕು. ಒಂದು ವೇಳೆ ಅಶಿಸ್ತಿನಿಂದ ವರ್ತಿಸಿದಲ್ಲಿ/ಕಾಲೇಜಿನ ಆಸ್ತಿಪಾಸ್ತಿ ಹಾನಿ ಮಾಡಿದಲ್ಲಿ ಅದರಿಂದಾಗುವ ನಷ್ಟವನ್ನು ವಿದ್ಯಾರ್ಥಿಯೇ ತುಂಬಿಕೊಡಬೇಕು.
  19. ಪಾಲಕರು ತಮ್ಮ ಮಗ/ಮಗಳ ಶೈಕ್ಷಣಿಕ ಮತ್ತು ಹಾಜರಾತಿ ಪ್ರಗತಿಯ ಬಗ್ಗೆ ಕಾಲಕಾಲಕ್ಕೆ ಕಾಲೇಜಿಗೆ ಖುದ್ದಾಗಿ ಬಂದು ತಿಳಿದುಕೊಳ್ಳಬೇಕು. ತಮ್ಮ ಮಗ/ಮಗಳ ಅಶಿಸ್ತಿನಿಂದ ಆದ ನಷ್ಟವನ್ನು ತುಂಬಿಕೊಡುವುದಕ್ಕೆ ಬದ್ಧರಾಗಿರಬೇಕು.
  20. ಯೂನಿಯನ್ ಜಿಮ ಖಾನಾ ಕಾಲೇಜಿನ ಪಠ್ಯೇತರ ಚಟುವಟಿಕೆಗಳನ್ನು ನಡೆಸಿಕೊಂಡು ಹೋಗಲು ಈ ಕೆಳಗೆ ನಮೂದಿಸಿದಂತೆ ಒಂದು ಸಮಿತಿ ಇರುತ್ತದೆ. ಸಮಿತಿಯು ಕಾಲೇಜಿನ ಚುನಾವಣಾ ನಿಯಮದಂತೆ ರಚಿಸಲ್ಪಟ್ಟಿದ್ದು ಈ ಕೆಳಗೆ ನಮೂದಿಸಿದಂತೆ ಇರುತ್ತದೆ.
ಅಧ್ಯಕ್ಷರುಪ್ರಾಚಾರ್ಯರು
ಉಪಾಧ್ಯಕ್ಷರುಓರ್ವ ಉಪನ್ಯಾಸಕ (ಪ್ರಾಚಾರ್ಯರಿಂದ ನಿಯುಕ್ತ)
ಸಲಹೆಗಾರರುi) ಯೂನಿಯನ್ ವಿಭಾಗಕ್ಕೆ ಪ್ರಾಚಾರ್ಯರಿಂದ ನಿಯುಕ್ತಗೊಳಿಸಲ್ಪಟ್ಟ ಓರ್ವ ಉಪನ್ಯಾಸಕ
ii) ಕ್ರೀಡಾ ವಿಭಾಗಕ್ಕೆ ದೈಹಿಕ ಶಿಕ್ಷಣ ನಿರ್ದೇಶಕರನ್ನೊಳಗೊಂಡ ಸಮಿತಿ
ಯೂನಿಯನ್ ಕಾರ್ಯದರ್ಶಿ(ಸಾಹಿತ್ಯಕ, ಸಾಂಸ್ಕೃತಿಕ, ವಿಭಾಗಗಳಿಗೆ ಸೇರಿ)
ಕ್ರೀಡಾ ಕಾರ್ಯದರ್ಶಿ(ಒಳಾಂಗಣ, ಹೊರಾಂಗಣ ಹಾಗೂ ಕ್ರೀಡೆಗೆ ಸೇರಿ) ಯೂನಿಯನ್ ಹಾಗೂ ಕ್ರೀಡಾ ಕಾರ್ಯದರ್ಶಿಗಳನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಆಧಾರ ಹಾಗೂ ನಡತೆಯ ಮೇರೆಗೆ ಆಯ್ಕೆ ಮಾಡಲಾಗುವುದು.