ಇತರ ಕಲಿಕಾ ಸೌಲಭ್ಯಗಳು

ಲೇಡಿಸ್ ಹಾಸ್ಟೆಲ್

ವಿದ್ಯಾರ್ಥಿನಿಯರಿಗಾಗಿ ಲೇಡಿಸ್ ಹಾಸ್ಟೆಲ್ ಸೌಲಭ್ಯ ಇರುತ್ತದೆ. (ಪ್ರವೇಶ ಸೀಮಿತವಾಗಿದೆ)

ಪ್ರಯೋಗಾಲಯ

ಈಜು ಕೊಳ

2. ಎನ್. ಸಿ. ಸಿ.

ಕಾಲೇಜಿನಲ್ಲಿ ಎನ್.ಸಿ.ಸಿ. ನೌಕಾ ಹಾಗೂ ಭೂದಳ ವಿಭಾಗವಿದ್ದು, ವಿದ್ಯಾರ್ಥಿಗಳು ಅದರ ಲಾಭ ಪಡೆದುಕೊಳ್ಳಬಹುದು.

ಗ್ರಂಥಾಲಯ

ಮಹಾವಿದ್ಯಾಲಯವು ಸುಸಜ್ಜಿತ ಗ್ರಂಥಾಲಯ ಹೊಂದಿದ್ದು, ಅದರ ನಿಯಮಗಳಿಗೆ ಅನುಸಾರವಾಗಿ ನಡೆದುಕೊಂಡು ಸಂಪೂರ್ಣ ಲಾಭ ಪಡೆಯಬೇಕು.

ಸಹ ಪಠ್ಯ ಚಟುವಟಿಕೆಗಳು

ವಿದ್ಯಾರ್ಥಿಗಳ ವ್ಯಕ್ತಿತ್ವದ ಸರ್ವಾಂಗೀಣ ವಿಕಾಸ ಶಿಕ್ಷಣದ ಗುರಿ. ಕಾರಣ ಪಠ್ಯದಷ್ಟೇ ಮಹತ್ವವನ್ನು ಸಹ ಪಠ್ಯ ಚಟುವಟಿಕೆಗಳಿಗೂ ನಮ್ಮ ಮಹಾವಿದ್ಯಾಲಯದಲ್ಲಿ ನೀಡಲಾಗಿದೆ. ವಿದ್ಯಾರ್ಥಿಗಳು ಅವರವರ ಆಸಕ್ತಿಗನುಗುಣವಾಗಿ ಈ ಕೆಳಗಿನ ಸಹಪಠ್ಯ ವಿಭಾಗಗಳಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು.

ರಂಗಕಲೆಗಳು ಹಾಗೂ ಸಾಹಿತ್ಯ
(ಯಕ್ಷಗಾನ, ನಾಟಕ, ಭಾಷಣ, ಸಾಹಿತ್ಯ ಇತ್ಯಾದಿ)

ಪ್ರೊ. ಎನ್. ಜಿ. ಅನಂತಮೂರ್ತಿ

ಸಂಗೀತ

ಪ್ರೊ. ಎನ್. ಜಿ. ಅನಂತಮೂರ್ತಿ

ದೈಹಿಕ ಶಿಕ್ಷಣ ಹಾಗೂ ಕ್ರೀಡಾ ಚಟುವಟಿಕೆಗಳು

ಪ್ರೊ. ಆರ್. ಕೆ. ಮೇಸ್ತ
ಕು. ನಾಗರತ್ನ ಗೊಂಡ

ಪ್ರಥಮ ಪಿ.ಯು.ಸಿ. ಪ್ರವೇಶ ಬಯಸುವ ವಿದ್ಯಾರ್ಥಿಗಳು ಈ ಮೇಲಿನ ಮುಖ್ಯ ಸಹಪಠ್ಯ ವಿಭಾಗಗಳಲ್ಲಿ ತಮಗೆ ಆಸಕ್ತಿ ಇರುವ ಯಾವುದಾದರೂ ಒಂದು ವಿಭಾಗವನ್ನು ಆಯ್ಕೆ ಮಾಡಿಕೊಂಡು ತಮ್ಮ ಪ್ರವೇಶ ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು.

ರಾಜ್ಯಮಟ್ಟದ ಕ್ರೀಡೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರತಿನಿಧಿಸಿ, ವೈಯಕ್ತಿಕ ಪ್ರಥಮಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ‘ಪ್ರತಿಭಾನ್ವಿತ’ ಪುರಸ್ಕಾರ ನೀಡಲಾಗುವುದಲ್ಲದೇ ಕಾಲೇಜಿನಲ್ಲಿ ಮುಂಬರುವ ವರ್ಷಗಳಲ್ಲಿ ವಿಶೇಷ ಸೌಲಭ್ಯಗಳನ್ನು ನೀಡಲಾಗುವುದು. ಹೆಚ್ಚಿನ ಸಾಧನೆಗೈದವರಿಗೆ ಪ್ರಾಯೋಜಿತ ಬಹುಮಾನಗಳ ಪ್ರೋತ್ಸಾಹವಿದೆ.

ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕಾಲೇಜಿನಲ್ಲಿ ಪರಿಣಿತ ಸಂಪನ್ಮೂಲ ವ್ಯಕ್ತಿಗಳಿಂದ ನಡೆಸುವ ಎಲ್ಲಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿಯು ಕಡ್ಡಾಯವಾಗಿದೆ.

ಕಾಲೇಜು ವಿದ್ಯಾರ್ಥಿ ಗ್ರಾಹಕರ ಸಂಘದಲ್ಲಿ ಉಪಯುಕ್ತವಾದ ಲೇಖನಾ ಹಾಗೂ ಕ್ರೀಡಾ ಸಾಮಾಗ್ರಿಗಳನ್ನು ಯೋಗ್ಯ ದರದಲ್ಲಿ ಪೂರೈಸಲಾಗುವುದು.

ವಿದ್ಯಾರ್ಥಿ ಕ್ಷೇಮಾಧಿಕಾರಿ ಅವರಿಂದ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳ ಕುರಿತು ಸಲಹೆ-ಸೂಚನೆ ಪಡೆದುಕೊಳ್ಳಬಹುದು.

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಉಚಿತ CET ತರಬೇತಿ ಹಾಗೂ ನುರಿತ ಉಪನ್ಯಾಸಕರಿಂದ ವಿಶೇಷ ಬೋಧನಾ ತರಗತಿಗಳ ಸೌಲಭ್ಯಗಳು ಹಾಗೂ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲಾಗುವುದು.