ಪಿ.ಯು.ಸಿ ಪ್ರಥಮ ವರ್ಷಕ್ಕೆ ಪ್ರವೇಶ ನಿಯಮಗಳು, ಆಯ್ಕೆ ಮತ್ತು ಶುಲ್ಕಗಳು
-
- ಎಸ್.ಎಸ್.ಎಲ್.ಸಿ. ಯಾ ತತ್ಸಮಾನ ಪರೀಕ್ಷೆಯ ಫಲಿತಾಂಶವು ಪ್ರಕಟಣೆಯಾದೊಡನೆ ಮಹಾವಿದ್ಯಾಲಯದ ಕಾರ್ಯಾಲಯದ ಕಾಲೇಜಿನ ಆಡಳಿತ ಮಂಡಳಿಯ ಕಛೇರಿಯಿಂದ ಪರಿಚಯ ಪತ್ರಿಕೆಯನ್ನು ಪಡೆದುಕೊಳ್ಳಬೇಕು. ತಮ್ಮ ತರಗತಿಗೆ ಸಂಬಂಧಪಟ್ಟ ಅರ್ಜಿ ನಮೂನೆಯನ್ನು ಪಡೆದುಕೊಂಡು ನಿಯಮ 2 ರಲ್ಲಿ ಕಾಣಿಸಿದಂತೆ ಸಂಬಂಧಪಟ್ಟ ವಿವರಗಳನ್ನೆಲ್ಲ ತುಂಬಿ, ಅಭ್ಯರ್ಥಿಯು ಈ ಕೆಳಗಿನ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಶುಲ್ಕವನ್ನು ತುಂಬಿ ಪ್ರವೇಶ ಮಾಡಿಸಬೇಕು.
- ಪ್ರಥಮ ಪಿಯುಸಿ ತರಗತಿಗೆ ದಾಖಲಾತಿ ಪಡೆಯುವಾಗ ಅರ್ಜಿ ನಮೂನೆಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು
- ಎಸ್.ಎಸ್.ಎಲ್.ಸಿ. ಯ ಮೂಲ ವರ್ಗಾವಣೆ ಪ್ರಮಾಣಪತ್ರ (T.C) ಮತ್ತು 1 ಪ್ರತಿ.
- ಎಸ್.ಎಸ್.ಎಲ್.ಸಿ. ಮೂಲ ಅಂಕಪಟ್ಟಿಯ ದೃಢೀಕೃತ 1 ಪ್ರತಿ ಅಥವಾ ತಾತ್ಕಾಲಿಕ ಅಂಕಪಟ್ಟಿಯ ದೃಢೀಕೃತ 1 ಪ್ರತಿ.
- ಎಸ್.ಎಸ್.ಎಲ್.ಸಿ. ಪರೀಕ್ಷಾ ಪ್ರವೇಶ ಪತ್ರದ (ಹಾಲ್ ಟಿಕೆಟ್) 1 ಪ್ರತಿ
- ಇತ್ತೀಚಿನ (ಎಸ್.ಎಸ್.ಎಲ್. ಸಿ. ಪರೀಕ್ಷೆಯ ನಂತರ ತೆಗೆಸಿದ) ಪಾಸ್ಪೋರ್ಟ ಅಳತೆಯ 2 ಪೊಟೋ (ಒಂದು ಪೋಟೋ ಅರ್ಜಿಗೆ ಅಂಟಿಸಬೇಕು)
- ಆಧಾರಕಾರ್ಡ, ಪಡಿತರ ಚೀಟಿ ಮತ್ತು ಬ್ಯಾಂಕ್ ಪಾಸ್ಬುಕ್ನ 1 ಪ್ರತಿ.
- ನಿಗದಿತ ಅವಧಿಯೊಳಗಿನ ಜಾತಿ ಮತ್ತು ಆದಾಯ ಪ್ರಮಾಣಪತ್ರದ 1 ಪ್ರತಿ. (ವಿದ್ಯಾರ್ಥಿವೇತನ ಮತ್ತು ಶುಲ್ಕ ವಿನಾಯತಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವವರಿಗೆ ಮಾತ್ರ)
- ವಿಕಲಚೇತನ ವಿದ್ಯಾರ್ಥಿಗಳಾಗಿದ್ದರೆ ಸಕ್ಷಮ ಪ್ರಾಧಿಕಾರವು ನೀಡಿರುವ ಪ್ರಮಾಣಪತ್ರದ 1 ದೃಢೀಕೃತ ಪ್ರತಿ
ವಿಶೇಷ ಸೂಚನೆ
- ಒಮ್ಮೆ ಸಲ್ಲಿಸಿದ ಮೂಲ ವರ್ಗಾವಣೆ ಪತ್ರವನ್ನು (T.C) ಪುನಃ ಹಿಂದಿರುಗಿಸಲಾಗುವುದಿಲ್ಲ. ವಿದ್ಯಾರ್ಥಿಗಳು ತಮಗೆ ಅವಶ್ಯವಿದ್ದಷ್ಟು ಧೃಢೀಕೃತ ಝೆರಾಕ್ಸ್ ಪ್ರತಿಯನ್ನು ಇಟ್ಟುಕೊಳ್ಳತಕ್ಕದ್ದು.
- CBSE ಮತ್ತು ಹೊರರಾಜ್ಯದಲ್ಲಿ ಉತ್ತೀರ್ಣರಾಗಿ ಪ್ರಥಮ ಪಿಯುಸಿಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳು MIGRATION CERTIFICATE ನೀಡಬೇಕು ಹಾಗೂ ಅರ್ಹತಾ ಪತ್ರದ ಶುಲ್ಕ (ELIGIBILITY CERTIFICATE FEE) Rs. 1000=00 ಪಾವತಿಸಬೇಕು.
- ಪ.ಪೂ.ಶಿ. ಇಲಾಖೆ ಸೂಚಿಸಿದ ಬೋರ್ಡಿನಿಂದ SSLC / ತತ್ಸಮಾನ ಪರೀಕ್ಷೆ ಉತ್ತೀರ್ಣರಾದರೆ ಮಾತ್ರ ದಾಖಲಾತಿ ನೀಡುವುದು
- ವಿದೇಶದಲ್ಲಿ ಅಥವಾ IGCSE/Cambridge International ಪಠ್ಯಕ್ರಮದಲ್ಲಿ SSLC 3 ಉತ್ತೀರ್ಣರಾದರೆ ಪ.ಪೂ.ಶಿ. ಇಲಾಖೆಯಿಂದ ತಾತ್ಕಾಲಿಕ ಅರ್ಹತಾ ಪತ್ರ ಪಡೆದರೆ ಮಾತ್ರ ದಾಖಲಾತಿ ಪಡೆದುಕೊಳ್ಳುವುದು.
- ಡುಪ್ಲಿಕೇಟ್ ಟಿ.ಸಿ. ಆದರೆ ಪ.ಪೂ.ಶಿಕ್ಷಣ ಇಲಾಖೆಯಿಂದ ಪೂರ್ವಾನುಮತಿ ಪಡೆದ ನಂತರ ದಾಖಲಾತಿ ಪಡೆದುಕೊಳ್ಳುವುದು
-
-
- ದ್ವಿತೀಯ ಪಿಯುಸಿ ತರಗತಿಗೆ ದಾಖಲಾತಿ ಪಡೆಯುವಾಗ ಅರ್ಜಿ ನಮೂನೆಯೊಂದಿಗೆ ಲಗತ್ತಿಸಬೇಕಾದ ದಾಖಲೆಗಳು
- ಪ್ರಥಮ ಪಿಯುಸಿ ಅಂಕಪಟ್ಟಿಯ 1 ಪ್ರತಿ
- ಎಸ್.ಎಸ್.ಎಲ್.ಸಿ. ಯ ವರ್ಗಾವಣೆ ಪ್ರಮಾಣ ಪತ್ರದ (T.C) 1 ಪ್ರತಿ.
- ಆಧಾರಕಾರ್ಡ್, ಪಡಿತರ ಚೀಟಿ ಮತ್ತು ಬ್ಯಾಂಕ್ ಪಾಸ್ಬುಕ್ನ 1 ಪ್ರತಿ.
- ನಿಗದಿತ ಅವಧಿಯೊಳಗಿನ ಜಾತಿ ಮತ್ತು ಆದಾಯ ಪ್ರಮಾಣಪತ್ರದ 1 ಪ್ರತಿ. (ವಿದ್ಯಾರ್ಥಿವೇತನ ಮತ್ತು ಶುಲ್ಕ ವಿನಾಯತಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವವರಿಗೆ ಮಾತ್ರ)
- ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಒಂದು ಪೋಟೋ ಅರ್ಜಿ ನಮೂನೆಗೆ ಅಂಟಿಸಬೇಕು.
- ವಿಕಲಚೇತನ ವಿದ್ಯಾರ್ಥಿಗಳಾಗಿದ್ದರೆ ಸಕ್ಷಮ ಪ್ರಾಧಿಕಾರವು ನೀಡಿರುವ ಪ್ರಮಾಣಪತ್ರದ 1 ಧೃಢೀಕೃತ ಪ್ರತಿ.
ವಿಶೇಷ ಸೂಚನೆ
- ಕಾಲೇಜು ಬದಲಾವಣೆ ಮೂಲಕ (Change of College) ದಾಖಲಾತಿ ಪಡೆಯುವ ವಿದ್ಯಾರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಸಹ ಲಗತ್ತಿಸಬೇಕಾಗಿರುತ್ತದೆ.
- ಭರ್ತಿ ಮಾಡಿದ ಕಾಲೇಜು ಬದಲಾವಣೆ ಅರ್ಜಿ ನಮೂನೆ (ಪ್ರಾಚಾರ್ಯರ ಸಹಿಯೊಂದಿಗೆ)
- ಕಾಲೇಜು ಬದಲಾವಣೆ ಶುಲ್ಕ ಪಾವತಿಸಿದ ಮೂಲ ಚಲನ್ ಮತ್ತು 1 ಪ್ರತಿ
- ಪ್ರಥಮ ಪಿಯುಸಿ ಮೂಲ ವರ್ಗಾವಣೆ ಪ್ರಮಾಣಪತ್ರ (T.C) ಮತ್ತು 1 ಪ್ರತಿ
- ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ 1 ಪ್ರತಿ
- ಜಿಲ್ಲಾ ಉಪನಿರ್ದೆಶಕರು ದೃಢೀಕರಿಸಿದ ಪ್ರಥಮ ಪಿಯುಸಿ ಅಂಕಪಟ್ಟಿಯ 2 ಪ್ರತಿ
- ಇತ್ತೀಚಿನ ಪಾಸ್ಪೋರ್ಟ ಅಳತೆಯ 2 ಪೊಟೋ (ಒಂದು ಪೋಟೋ ಅರ್ಜಿಗೆ ಅಂಟಿಸಬೇಕು)
ಹೊರ ರಾಜ್ಯ, ವಿದೇಶದಲ್ಲಿ ಅಥವಾ IGCSE/Cambridge International ಪಠ್ಯಕ್ರಮದಲ್ಲಿ ಪ್ರಥಮ ಪಿಯುಸಿ ಉತ್ತೀರ್ಣರಾದರೆ ಪ.ಪೂ.ಶಿ. ಇಲಾಖೆಯಿಂದ ತಾತ್ಕಾಲಿಕ ಅರ್ಹತಾ ಪತ್ರ ಪಡೆದರೆ ಮಾತ್ರ ದಾಖಲಾತಿ ಪಡೆದುಕೊಳ್ಳುವುದು.
-
- ಪಿ.ಯು.ಸಿ.ಗೆ ಪ್ರವೇಶ ಪಡೆಯುವಾಗ ಪ್ರವೇಶ ಅರ್ಜಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷಾ ಪ್ರವೇಶ ಪತ್ರ (ಹಾಲ್ ಟಿಕೇಟ್)ದಲ್ಲಿ ನಮೂದಿಸಿದಂತೆ ಹೆಸರನ್ನು ಬರೆಯಬೇಕು.
- ನಮ್ಮ ವಿದ್ಯಾಲಯದಿಂದ ಟ್ರಾನ್ಸ್ಫರ್ ಸರ್ಟಿಫಿಕೇಟ್ ಬೇಕಾದಲ್ಲಿ ರೂ. 100=00 ನ್ನು ತುಂಬಿ ಅರ್ಜಿಯ ಜೊತೆಗೆ ಎಸ್.ಎಸ್.ಎಲ್.ಸಿ. ವರ್ಗಾವಣೆ ಪತ್ರದ (T.C) ಪ್ರತಿ ಹಾಗೂ ಅಂಕಪಟ್ಟಿಯ ಪ್ರತಿ ಲಗತ್ತಿಸಿ ಕಾರ್ಯಾಲಯದಲ್ಲಿ ಕೊಡಬೇಕು. ನಿಮ್ ಎಲ್ಲಾ ಕಡತಗಳನ್ನು ಪರಿಶೀಲಿಸಿ ಅದನ್ನು ನೀಡಲಾಗುವುದು.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಸರಕಾರವು ನೀಡುವ ಎಲ್ಲಾ ವಿನಾಯತಿಗಳನ್ನು ನೀಡಲಾಗುವುದು.
- ಕಾಲೇಜಿನಲ್ಲಿ ನೀಡುವ ಪ್ರವೇಶ ತಾತ್ಕಾಲಿಕವಾಗಿರುತ್ತದೆ. ಅಂತಿಮ ನಿರ್ಣಯವು ಪದವಿ ಪೂರ್ವ ಶಿಕ್ಷಣ ಇಲಾಖೆಯದ್ದಾಗಿರುತ್ತದೆ.
- ವರ್ಷದ ಮಧ್ಯದಲ್ಲಿ ಮಹಾವಿದ್ಯಾಲಯವನ್ನು ಬಿಟ್ಟು ಹೋದಲ್ಲಿ ಯಾವ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. ಸರಕಾರದ ಆದೇಶದಂತೆ ಶುಲ್ಕಗಳಲ್ಲಿ ಬದಲಾವಣೆಗಳು ಆಗಬಹುದು.
- ವಿದ್ಯಾರ್ಥಿಗಳಿಗೆ ನೀಡಬೇಕಾದ ವಿವಿಧ ಸೂಚನೆಗಳನ್ನು ಆಯಾ ವೇಳೆಗೆ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಪ್ರತಿದಿನವೂ ಸೂಚನಾ ಫಲಕಗಳನ್ನು ಗಮನಿಸುತ್ತಿರಬೇಕು.
- ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣರಾದವರು ಪುನಃ ಪ್ರವೇಶ ಬಯಸಿದಲ್ಲಿ ಪಿಯು ಮಂಡಳಿಯ ಪೂರ್ವಾನುಮತಿಯೊಂದಿಗೆ ಪ್ರಥಮ ಪಿಯುಸಿ ತರಗತಿಯ ಬೇರೆ ಕೋರ್ಸಿಗೆ ಪ್ರವೇಶ ಪಡೆಯಬಹುದು.
ಮಹಾವಿದ್ಯಾಲಯದ ಸಮವಸ್ತ್ರ ವಾರದ ಎಲ್ಲಾ ದಿನವೂ ಕಡ್ಡಾಯವಾಗಿರುತ್ತದೆ. ಸಮವಸ್ತ್ರದ ಬಟ್ಟೆಯು ಮಹಾವಿದ್ಯಾಲಯದ ವಿದ್ಯಾರ್ಥಿ ಗ್ರಾಹಕರ ಸಂಘದಲ್ಲಿ ಪಡೆಯಬಹುದು.