ಕಳೆದ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇಕಡಾ 81.82 ಫಲಿತಾಂಶವನ್ನು, ವಿಜ್ಞಾನ ವಿಭಾಗದಲ್ಲಿ ಶೇಕಡಾ 79.64 ಫಲಿತಾಂಶವನ್ನು ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇಕಡಾ 87.77 ಫಲಿತಾಂಶವನ್ನು ಪಡೆದಿದ್ದು ಒಟ್ಟು ದ್ವಿತೀಯ ಪಿಯುಸಿ ವಿಭಾಗದಲ್ಲಿ ಶೇಕಡಾ 84.17 ಫಲಿತಾಂಶ ಬಂದಿರುತ್ತದೆ.
ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ವಿಶಾಲಾ ವೆಂಕಟೇಶ ಗೌಡ ಇವಳು ಶೇಕಡಾ 91.50 ರಷ್ಟು ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.
ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ, ರೇಖಾ ಮಾರುತಿ ಶೇಟ್ ಇವಳು ಶೇಕಡಾ 95.17 ರಷ್ಟು ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.
ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಅಂಕಿತಾ ಶ್ರೀಧರ ಭಟ್ಟ, ಇವಳು ಶೇಕಡಾ 98.00 ರಷ್ಟು ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದುದಲ್ಲದೇ, ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸುವುದರ ಮೂಲಕ ನಮ್ಮ ಮಹಾವಿದ್ಯಾಲಯಕ್ಕೆ ಕೀರ್ತಿಯನ್ನು ತಂದಿರುತ್ತಾಳೆ.
ದಿನಾಂಕ 30/11/2019 ಮತ್ತು 01/12/2019ರಂದು ಎಸ್.ಡಿ.ಎಂ. ಇನ್ಸುಟ್ಯುಟ್ ಆಫ್ ಟೆಕ್ನೋಲಜಿ, ಉಜಿರೆಯಲ್ಲಿ ನಡೆದ ರಾಜ್ಯ ಮಟ್ಟದ Experia – 2K19 ಸ್ಪರ್ಧೆಯಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ಸುಮುಖ ಎಸ್. ಭಟ್ಟ – ಪ್ರಥಮ ಪಿಯುಸಿ ವಿಜ್ಞಾನ – Maths Puzzle (Mathrix)ನಲ್ಲಿ ಪ್ರಥಮ ಸ್ಥಾನ, ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾನೆ.
ದಿನಾಂಕ 01/12/2019 ರಂದು ತುಂಗಳ ವಿಜ್ಞಾನ ಪದವಿ ಪೂರ್ವ ಕಾಲೇಜು, ಇಟ್ಟಂಗಿಹಾಳ, ವಿಜಯಪುರದಲ್ಲಿ ನಡೆದ ವಿಭಾಗ ಮಟ್ಟದ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ನಿಹಾರಿಕಾ ಶ್ರೀಧರ ಭಟ್ಟ, ಭಕ್ತಿಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.
ದಿನಾಂಕ 21/12/2019 ರಂದು ಬೆಂಗಳೂರಿನ ಕ್ರೈಸ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ನಿಹಾರಿಕಾ ಶ್ರೀಧರ ಭಟ್ಟ ಇವಳು ಭಕ್ತಿಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾಳೆ.
ಪಿ.ಎಸ್.ಕಾಮತ್ ಸ್ಮರಣಾರ್ಥ ದಿನಾಂಕ 25-1-2020 ರಂದು ಕೆನರಾ ವೆಲ್‌ಫೇರ್ ಟ್ರಸ್ಟ್‌ನ ದಿವೇಕರ ಕಾಮರ್ಸ ಕಾಲೇಜು ಕಾರವಾರದಲ್ಲಿ ಜರುಗಿದ ಜಿಲ್ಲಾಮಟ್ಟದ 9 ನೇ ಅಂತರ್‌ಕಾಲೇಜು ಚರ್ಚಾ ಸ್ಪರ್ಧೆಯಲ್ಲಿ ಎಸ್.ಡಿ.ಎಂ. ಪದವಿ ಪೂರ್ವ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಮೇಧಾ ಶಂಕರ ಭಟ್ಟ ಇವಳು ತೃತೀಯ ಸ್ಥಾನದೊಂದಿಗೆ ರೂ. 20,000 ನಗದು ಬಹುಮಾನ ಪಡೆದಿರುತ್ತಾಳೆ ಪದವಿ ಪೂರ್ವ, ಪದವಿ ಮತ್ತು ವೃತ್ತಿಪರ ಕೋರ್ಸುಗಳ ವಿದ್ಯಾರ್ಥಿಗಳು ಭಾಗವಹಿಸಿದ ಸ್ಪರ್ಧೆಯಲ್ಲಿ ಈಕೆ ಬಹುಮಾನ ಪಡೆದಿರುವುದು ವಿಶೇಷವಾಗಿದೆ.
ದಿನಾಂಕ 08 ಸೆಪ್ಟೆಂಬರ್ 2019 ರಂದು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಮಟ್ಟದ 17th ALL INDIA INVITATIONAL KARATE CHAMPIONSHIP- 2019 ಸ್ಪರ್ಧೆಯಲ್ಲಿ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಯಾದ ಪ್ರಜ್ವಲ ಪ್ರದೀಪ ಶೆಟ್ಟಿ ಇವನು ಪ್ರಥಮ ಸ್ಥಾನ ಪಡೆದು ನಮ್ಮ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾನೆ.
ದಿನಾಂಕ 23 ಮತ್ತು 26 ಸೆಪ್ಟೆಂಬರ 2019 ರಂದು ಭಟ್ಕಳದಲ್ಲಿ ನಡೆದ ಪದವಿ ಪೂರ್ವ ಮಹಾವಿದ್ಯಾಲಯಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಮಹಾವಿದ್ಯಾಲಯದ
ಬಾಲಕರ ವಿಭಾಗದಲ್ಲಿ
1. ದರ್ಶನ ಗೌಡ ಪಿ.ಯು. ದ್ವಿತೀಯ ವಾಣಿಜ್ಯ- 400ಮೀ. ಹಾಗೂ 400ಮೀ ಹರ್ಡಲ್ಸನಲ್ಲಿ ಚಿನ್ನ ಮತ್ತು 110ಮೀ. ಹರ್ಡಲ್ಸನಲ್ಲಿ ಕಂಚಿನ ಪದಕ.
2. ಪ್ರಶಾಂತ ಗೌಡ ಪಿ.ಯು. ಪ್ರಥಮ ವಾಣಿಜ್ಯ – ಪೊಲ್ ವಾಲ್ಟನಲ್ಲಿ ಬೆಳ್ಳಿಯ ಪದಕವನ್ನು ಪಡೆದಿರುತ್ತಾನೆ.
ಬಾಲಕಿಯರ ವಿಭಾಗದಲ್ಲಿ
1. ಅನುಷಾ ಗೌಡ ಪಿ.ಯು. ದ್ವಿತೀಯ ವಿಜ್ಞಾನ – ಗುಂಡು ಎಸೆತ ಮತ್ತು ಚಕ್ರ ಎಸೆತದಲ್ಲಿ ಚಿನ್ನದ ಪದಕ
2. ವೈಭವಿ ಆಚಾರ್ಯ ಪಿ.ಯು. ದ್ವಿತೀಯ ವಾಣಿಜ್ಯ- ಎತ್ತರ ಜಿಗಿತದಲ್ಲಿ ಚಿನ್ನದ ಪದಕವನ್ನು ಪಡೆದಿದ್ದಲ್ಲದೆ, ಈ ಎಲ್ಲಾ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿರುತ್ತಾರೆ.
ಎನ್.ಸಿ.ಸಿಯ ನೌಕಾದಳದಲ್ಲಿ ನಮ್ಮ ಮಹಾವಿದ್ಯಾಲಯದ ದ್ವಿತೀಯ ಪಿ.ಯು. ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾದ ಲೀಡ್ ಕೆಡೆಟ್ ನಾಗೇಶ ಜೆ. ನಾಯ್ಕ ಇವರು 30 ದಿನಗಳ ಕಠಿಣ ತರಬೇತಿಯ ನಂತರ ಅಕ್ಟೋಬರ್‍ನಲ್ಲಿ ಆಂದ್ರಪ್ರದೇಶದ ವೈಜಾಗ್‌ನಲ್ಲಿ ನಡೆದ ALL INDIA NAU SAINIK CAMP- 2019 ಗೆ ಆಯ್ಕೆಯಾಗಿ, ಬೋಟ್ ಪುಲ್ಲಿಂಗ್, ಬೋಟ್ ರಿಗ್ಗಿಂಗ್, ಡ್ರಿಲ್ ನಂತಹ ವಿವಿಧ ನೌಕಾ ಸ್ಪರ್ಧಾತ್ಮಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಭಾರತ ಮಟ್ಟದಲ್ಲಿ ಕಂಚಿನ ಪದಕವನ್ನು ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ.