ಕಳೆದ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಶೇಕಡಾ 73.33 ಫಲಿತಾಂಶವನ್ನು, ವಿಜ್ಞಾನ ವಿಭಾಗದಲ್ಲಿ ಶೇಕಡಾ 89.75 ಫಲಿತಾಂಶವನ್ನು ಹಾಗೂ ವಾಣಿಜ್ಯ ವಿಭಾಗದಲ್ಲಿ ಶೇಕಡಾ 86.53 ಫಲಿತಾಂಶವನ್ನು ಪಡೆದಿದ್ದು ಒಟ್ಟು ದ್ವಿತೀಯ ಪಿಯುಸಿ ವಿಭಾಗದಲ್ಲಿ ಶೇಕಡಾ 86.84 ಫಲಿತಾಂಶ ಬಂದಿರುತ್ತದೆ.
* ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ಕುಮಾರಿ. ನಯನಾ ಗಜಾನನ ನಾಯ್ಕ ಇವಳು ಶೇಕಡಾ 92 ರಷ್ಟು ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾಳೆ.
* ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಕುಮಾರಿ. ಸುಕನ್ಯಾ ಎಸ್. ಹೆಗಡೆ & ಕುಮಾರ. ಪ್ರವೀಣ ವಿ. ನಾಯ್ಕ ಇವರಿಬ್ಬರು ಶೇಕಡಾ 97.17 ರಷ್ಟು ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
* ದ್ವಿತೀಯ ಪಿಯು ವಾಣಿಜ್ಯ ವಿಭಾಗದಲ್ಲಿ ಕುಮಾರ. ಮನೋಜ ಗಣೇಶ ಪಂಡಿತ್, ಇವನು ಶೇಕಡಾ 95.50 ರಷ್ಟು ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾನೆ.
ದಿನಾಂಕ 19-11-2018 ರಂದು ಲೊಯೋಲ ಸಂಯುಕ್ತ ಪದವಿ ಪೂರ್ವ ಕಾಲೇಜು ಮುಂಡಗೋಡದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ನಮ್ಮ ಮಹಾವಿದ್ಯಾಲಯದ ಈ ಕೆಳಗಿನ ವಿದ್ಯಾರ್ಥಿಗಳಾದ
ಅಖಿಲಾ ನಾಗರಾಜ ಹೆಗಡೆ – ದ್ವಿ. ಪಿ.ಯು ವಾಣಿಜ್ಯ – ಜಾನಪದಗೀತೆ – ಪ್ರಥಮ
ಸ್ವಾತಿ ಡಿ.ಕಾಮತ್ – ದ್ವಿ. ಪಿ.ಯು ವಾಣಿಜ್ಯ – ಇಂಗ್ಲೀಷ್ ಪ್ರಬಂಧ ಸ್ಪರ್ಧೆ – ದ್ವಿತೀಯ
ಹರ್ಷ ಡಿ. ಗಂಗೊಳ್ಳಿ – ಪ್ರ. ಪಿ.ಯು ವಾಣಿಜ್ಯ – ರಸಪ್ರಶ್ನೆ – ದ್ವಿತೀಯ
ಪ್ರಸನ್ನ ಮಂಜುನಾಥ ಹೆಗಡೆ – ಪ್ರ. ಪಿ.ಯು ವಿಜ್ಞಾನ – ರಸಪ್ರಶ್ನೆ – ದ್ವಿತೀಯ
ಯೊಗೇಶ ಕ್ಷೇತ್ರ ಗೌಡ – ದ್ವಿ. ಪಿ.ಯು ವಿಜ್ಞಾನ – ರಸಪ್ರಶ್ನೆ – ತೃತೀಯ
ವಿನೀತ್ ಗಣೇಶ ಭಟ್ಟ – ದ್ವಿ. ಪಿ.ಯು ವಿಜ್ಞಾನ – ರಸಪ್ರಶ್ನೆ – ತೃತೀಯ
ಧನ್ಯಾ ವಿ. ಎಚ್ – ಪ್ರ. ಪಿ.ಯು ವಿಜ್ಞಾನ – ಭಾವಗೀತೆ – ತೃತೀಯ
ದಿನಾಂಕ: 15/12/2018 ರಂದು ಬೆಂಗಳೂರಿನ ಸೇಂಟ್ ಜೋಸೆಫ್ ಬಾಲಕಿಯರ ಪ.ಪೂ. ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಯಲ್ಲಿ ಕುಮಾರಿ. ಅಖಿಲಾ ಎಸ್. ಹೆಗಡೆ, ದ್ವಿತೀಯ ಪಿ.ಯು. ವಾಣಿಜ್ಯ ವಿಭಾಗ ಇವಳು ಜಾನಪದಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟದಲ್ಲಿ ತನ್ನ ಪ್ರತಿಭೆಯನ್ನು ಗುರುತಿಸಿಕೊಂಡಿದ್ದಲ್ಲದೆ ನಮ್ಮ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿರುತ್ತಾಳೆ.
ಕ್ರೀಡಾ ಚಟುವಟಿಕೆಗಳಲ್ಲಿ ನಮ್ಮ ವಿದ್ಯಾರ್ಥಿಗಳ ಸಾಧನೆ
ದಿನಾಂಕ 05/9/2018, ರಂದು, ಆಳ್ವಾಸ ಎಜ್ಯುಕೇಶನ್ ಪೌಂಡೇಶನ್, ಮೂಡುಬಿದಿರೆ, ದಕ್ಷಿಣ ಕನ್ನಡ ಇವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಅಮೆಚ್ಯುರ್ ಕ್ರೀಡಾಕೂಟದಲ್ಲಿ ನಮ್ಮ ಮಹಾವಿದ್ಯಾಲಯದ ಪ್ರಥಮ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿಯಾದ ಕು. ಆದರ್ಶ ನಾಗೇಶ ನಾಯ್ಕ, ಜಾವೆಲಿನ್ ಎಸೆತದಲ್ಲಿ ಬಂಗಾರದ ಪದಕ ಪಡೆದು ಮಹಾವಿದ್ಯಾಲಯಕ್ಕೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುತ್ತಾನೆ.
ದಿನಾಂಕ 19/09/2018 ರಂದು ವೈ.ಟಿ.ಎಸ್. ಪ.ಪೂ. ಕಾಲೇಜು, ಯಲ್ಲಾಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ನಮ್ಮ ಮಹಾವಿದ್ಯಾಲಯದ
ಬಾಲಕರ ವಿಭಾಗದಲ್ಲಿ
1. ಸಫಲ್ ಶೆಟ್ಟಿ. ಪಿಯು ಪ್ರಥಮ ವಿಜ್ಞಾನ, 100ಮೀ-ಕಂಚು, 200ಮೀ-ಬೆಳ್ಳಿ, 4×100ಮೀ-ಬಂಗಾರದ ಪದಕ.
2. ರಜತ್ ಎಸ್ ಮಡಿವಾಳ, ಪಿಯು ದ್ವಿತೀಯ ವಿಜ್ಞಾನ, 4×100ಮೀ-ಬಂಗಾರದ ಪದಕ.
3. ಕಾರ್ತಿಕ ಎಂ ನಾಯ್ಕ, ಪಿಯು ದ್ವಿತೀಯ ವಿಜ್ಞಾನ, ತ್ರಿವಿದ ಜಿಗಿತ ಮತ್ತು 4×100ಮೀ-ಬಂಗಾರದ ಪದಕ.
4. ಆದರ್ಶ ಎನ್ ನಾಯ್ಕ, ಪಿಯು ಪ್ರಥಮ ಕಲಾ, ಚಕ್ರ ಎಸೆತ-ಬೆಳ್ಳಿ ಪದಕ.
5. ದರ್ಶನ ಆರ್ ಗೌಡ, ಪಿಯು ಪ್ರಥಮ ವಾಣಿಜ್ಯ, , 400ಮೀ ಮತ್ತು 4×400ಮೀ-ಬಂಗಾರದ ಪದಕ.
ಬಾಲಕಿಯರ ವಿಭಾಗದಲ್ಲಿ
1. ಅನುಷಾ ಜಿ ಗೌಡ, ಪಿಯು ಪ್ರಥಮ ವಿಜ್ಞಾನ, ಗುಂಡುಎಸೆತ – ಬೆಳ್ಳಿ, ಚಕ್ರ ಎಸೆತ- ಬಂಗಾರದ ಪದಕ.
2. ವೈಭವಿ ಎಸ್ ಆಚಾರ್ಯಾ, ಪಿಯು ಪ್ರಥಮ ವಾಣಿಜ್ಯ, ಎತ್ತರಜಿಗಿತ-ಬಂಗಾರದ ಪದಕ.
ಇವರಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಪಡೆದ 5 ವಿದ್ಯಾರ್ಥಿಗಳು ಹಾಗೂ 2 ವಿದ್ಯಾರ್ಥಿನಿಯರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಅಲ್ಲಿ ಉತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ನಮ್ಮ ಮಹಾವಿದ್ಯಾಲಯದ ಹಿರಿಮೆಯನ್ನು ಹೆಚ್ಚಿಸಿರುತ್ತಾರೆ.