ಪರೀಕ್ಷೆಗಳು

  1. ಎಲ್ಲಾ ಪಿ.ಯು.ಸಿ. ತರಗತಿಗಳಿಗೆ ವರ್ಷಕ್ಕೆ ಅನೇಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
    • ಮದ್ಯಾವಧಿ ಪರೀಕ್ಷೆ ಅಕ್ಟೋಬರ್ ಮೊದಲ ವಾರದಲ್ಲಿ
    • ಪೂರ್ವ ಸಿದ್ಧತಾ ಪರೀಕ್ಷೆ – ಫೆಬ್ರುವರಿ ಮೊದಲ ವಾರದಲ್ಲಿ
  2. ಈ ಪರೀಕ್ಷೆ ಅಲ್ಲದೆ ನಾಲ್ಕು ಟೆಸ್ಟ್ ಗಳನ್ನು ಮಾಡಲಾಗುವುದು. ಎರಡು ಟೆಸ್ಟ್ಗಳು ಮೊದಲನೇ ಅವಧಿಯಲ್ಲಿ ಹಾಗೂ ಎರಡು ಟೆಸ್ಟ್ ಗಳು ಎರಡನೇ ಅವಧಿಯಲ್ಲಿ ಇದನ್ನು ಆಯಾ ವಿಷಯದ ಉಪನ್ಯಾಸಕರು ನಡೆಸುತ್ತಾರೆ.
  3. ವಿದ್ಯಾರ್ಥಿಗಳು ಕಡ್ಡಾಯವಾಗಿ ಎಲ್ಲ ಟೆಸ್ಟ್ ಮತ್ತು ಪರೀಕ್ಷೆಗಳಿಗೆ ಹಾಜರಾಗಬೇಕು.
  4. ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಬೇಕು. ಕಾಲೇಜಿನಲ್ಲಿ ಪಾಲಕರ ಸಭೆಯನ್ನು ಕರೆದ ವೇಳೆಯಲ್ಲಿ ತಪ್ಪದೇ ಸಭೆಗೆ ಬಂದು ಸೂಕ್ತ ಸಲಹೆ ಸೂಚನೆಗಳನ್ನು ನೀಡಿ ಸಹಕರಿಸುವುದು. ಅಲ್ಲದೆ ತಮ್ಮ ಮಕ್ಕಳ ಶೈಕ್ಷಣಿಕ ಸಲಹೆಗಾರರು ಯಾರೆಂದು ತಿಳಿದುಕೊಂಡು ಅವರೊಂದಿಗೆ ಆಗಾಗ ಸಮಾಲೋಚಿಸುವುದು.
  5. ಪಾಲಕರು ಪ್ರತಿ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ ಎರಡು ಬಾರಿಯಾದರೂ ಕಾಲೇಜಿಗೆ ಭೇಟಿ ಕೊಟ್ಟು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಕುರಿತು ಉಪನ್ಯಾಸಕರೊಂದಿಗೆ ಚರ್ಚಿಸಬೇಕೆಂದು ಕೋರಲಾಗಿದೆ.